ಹೈದರಾಬಾದ್: ಟಾಲಿವುಡ್ ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಶ್ರೀಲೀಲಾ ಈಗ ಒಂದಾದ ಮೇಲೊಂದರಂತೆ ಅವಕಾಶ ಗಿಟ್ಟಿಸುತ್ತಿದ್ದಾರೆ. ಶ್ರೀಲೀಲಾ ಒಟ್ಟೊಟ್ಟಿಗೇ ಐದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಪಡೆದಿದ್ದ ಪ್ರಾಮುಖ್ಯತೆ ಈಗ ಶ್ರೀಲೀಲಾ ಪಾಲಾಗುತ್ತಿದೆ.ಶ್ರೀಲೀಲಾ ಕೇವಲ ರಶ್ಮಿಕಾ ಮಾತ್ರವಲ್ಲ, ಟಾಲಿವುಡ್ ನ ಇನ್ನೊಬ್ಬ ಬೆಡಗಿ ಪೂಜಾ ಹೆಗ್ಡೆ ಜೊತೆಗೂ ಕಾಂಪಿಟೀಷನ್ ಗೆ ಮುಂದಾಗಿದ್ದಾರೆ. ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ ಸಿನಿಮಾದಲ್ಲಿ ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಕೂಡಾ ಅಭಿನಯಿಸಲಿದ್ದಾರೆ.