ಬೆಂಗಳೂರು: ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕನ್ನಡತಿ ಶ್ರೀಲೀಲಾ ಮುಂದೆ ಕನ್ನಡ ಸಿನಿಮಾ ಮಾಡಲ್ವಾ ಎಂಬ ಸಿನಿ ರಸಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಶ್ರೀಲೀಲಾ ಈ ಬಗ್ಗೆ ಖುದ್ದಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಸದ್ಯದಲ್ಲೇ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.ಟಾಲಿವುಡ್ ನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ರಂತಹ ಘಟಾನುಘಟಿಗಳಿಗೆ ನಾಯಕಿಯಾಗಿರುವ ಶ್ರೀಲೀಲಾ ಈಗ ಬಹುಬೇಡಿಕೆಯ ನಟಿ. ಸಂಭಾವನೆ ವಿಚಾರದಲ್ಲೂ 4-5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೀಗ