ಹೈದರಾಬಾದ್: ಕನ್ನಡದಿಂದ ತೆಲುಗಿಗೆ ಹಾರಿದ ನಟಿ ಶ್ರೀಲೀಲಾ ಈಗ ಟಾಲಿವುಡ್ ನಲ್ಲೇ ಪ್ರಮುಖ ಹೀರೋಯಿನ್ ಗಳಿಗೆ ಠಕ್ಕರ್ ಕೊಡುವಷ್ಟು ಬ್ಯುಸಿಯಾಗಿದ್ದಾರೆ.ಕನ್ನಡದಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿರುವ ಶ್ರೀಲೀಲಾ ತೆಲುಗಿನಲ್ಲಿ ನಟಿಸಿರುವ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಈ ಸಿನಿಮಾಗಳಿಂದ ಟಾಲಿವುಡ್ ಮಂದಿ ಶ್ರೀಲೀಲಾಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.ಈಗ ಶ್ರೀಲೀಲಾ ಕೈಯಲ್ಲಿ ಒಟ್ಟು ಎಂಟು ತೆಲುಗು ಸಿನಿಮಾಗಳಿವೆ. ಈ ಪೈಕಿ ಎರಡು ಸಿನಿಮಾಗಳು ಪೂರ್ತಿಯಾಗಿದ್ದು, ಬಿಡುಗಡೆಗೆ ಸಿದ್ಧವಿದೆ. ಉಳಿದಂತೆ ಆರು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದೆ.