ಭರಾಟೆ ಬಳಿಕ ಶ್ರೀಮುರಳಿ ಮುಂದಿನ ಸಿನಿಮಾ ಯಾವುದು ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 25 ಅಕ್ಟೋಬರ್ 2019 (09:31 IST)
ಬೆಂಗಳೂರು: ಈಗಷ್ಟೇ ಭರಾಟೆ ಸಿನಿಮಾ ಬಿಡುಗಡೆಯಾಗಿ ಅದರ ಯಶಸ್ಸಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸುಳಿವು ಕೊಟ್ಟಿದ್ದಾರೆ.

 
ಶ್ರೀ ಮುರಳಿಗೆ ಅತ್ಯಂತ ಹೆಚ್ಚು ಹೆಸರು, ಯಶಸ್ಸು ಕೊಟ್ಟ ಸಿನಿಮಾ ಉಗ್ರಂ. ಶ್ರೀಮುರಳಿಗೆ ಬೇರೆಯದೇ ಒಂದು ಇಮೇಜ್ ಕೊಟ್ಟಿದ್ದು ಈ ಸಿನಿಮಾ. ಹೀಗಾಗಿ ಶ್ರೀಮುರಳಿ ಉಗ್ರಂ ಭಾಗ 2 ಕ್ಕೆ ತಯಾರಾಗುತ್ತಿದ್ದಾರಂತೆ.
 
ಈ ಸಿನಿಮಾದ ಮುಂದುವರಿದ ಭಾಗ ತನ್ನ ಮುಂದಿನ ಪ್ರಾಜೆಕ್ಟ್ ಎಂದು ಅವರು ಸುಳಿವು ನೀಡಿದ್ದಾರೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. 2014 ರಲ್ಲಿ ಬಂದಿದ್ದ ಉಗ್ರಂ ಸಿನಿಮಾ ನಿರ್ದೇಶಕರು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್. ಸದ್ಯಕ್ಕೆ ಪ್ರಶಾಂತ್ ಕೆಜಿಎಫ್ 2 ಚಿತ್ರೀಕರಣದಲ್ಲಿ ಬ್ಯುಸಿ. ಹಾಗಾಗಿ ಉಗ್ರಂ 2 ಯಾರ ನೇತೃತ್ವದಲ್ಲಿ ಬರಲಿದೆ ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :