ಬೆಂಗಳೂರು: ಕೆಜಿಎಫ್ ಚಿತ್ರದ ಗರ್ಭದಿ ನನ್ನಿರಿಸಿ ಹಾಡನ್ನು ಶ್ರೀಲಂಕಾ ಗಾಯಕಿ ಹಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.ಶ್ರೀಲಂಕಾ ಮೂಲದ ಹನ್ಸಿನಿ ವಿಮಲ್ಸಿರಿ ಕೆಜಿಎಫ್ ನ ಕನ್ನಡ ಹಾಡನ್ನು ಹಾಡಿ ಯೂ ಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದರು. ಉಚ್ಚಾರಣೆಯಲ್ಲಿ ಎಲ್ಲೂ ಲೋಪವಾಗದಂತೆ ಪಕ್ಕಾ ಕನ್ನಡತಿಯಂತೆ ಹಾಡಿರುವ ಈಕೆಯ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಕನ್ನಡ ಬಾರದೇ ಇದ್ದರೂ ಸ್ಪಷ್ಟವಾಗಿ ಕನ್ನಡ ಉಚ್ಚಾರಣೆ ಮಾಡಿರುವ ಈಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ