ಹೈದರಾಬಾದ್: ಕನ್ನಡದಿಂದ ತೆಲುಗಿಗೆ ವಲಸೆ ಹೋಗಿ ಮಿಂಚಿದ ನಟಿಮಣಿಯರ ಪೈಕಿ ರಶ್ಮಿಕಾ ಮಂದಣ್ಣ ಹೆಸರು ಎಲ್ಲರಿಗೂ ಥಟ್ಟನೇ ಬರುತ್ತದೆ.ಇದೀಗ ರಶ್ಮಿಕಾಳಂತೇ ಶ್ರೀಲೀಲಾ ಕೂಡಾ ತೆಲುಗಿನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಮುಗಿಸಿರುವ ಶ್ರೀಲೀಲಾಗೆ ಅಲ್ಲಿ ಈಗ ಭರ್ಜರಿ ಆಫರೇ ಸಿಗುತ್ತಿದೆ.ಮೂಲಗಳ ಪ್ರಕಾರ ಮಹೇಶ್ ಬಾಬು ಮಾಡಲಿರುವ ಹೊಸ ಸಿನಿಮಾಗೆ ಶ್ರೀಲೀಲಾ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬರಬೇಕಿದೆ.