ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು ಲಾಂಚ್ ಆಗಿದ್ದು, ಶ್ರೀಮುರಳಿಯ ಹಿಂದಿನ ‘ಉಗ್ರಂ’ ಸಿನಿಮಾ ನೆನಪಿಸುವಂತಿದೆ.ಶ್ರೀಮುರಳಿ ‘ಉಗ್ರಂ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪ್ರಶಾಂತ್ ನೀಲ್ ಟೀಸರ್ ಲಾಂಚ್ ಮಾಡಿದ್ದಾರೆ. ಉಮಾಪತಿ ಗೌಡ ನಿರ್ಮಾಣದ ‘ಮದಗಜ’ ಸಿನಿಮಾದಲ್ಲಿ ಶ್ರೀಮುರಳಿ ಜತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇಂದು ಶ್ರೀಮುರಳಿ ಜನ್ಮದಿನವಾಗಿದ್ದು, ಈ ಟೀಸರ್ ನೋಡಿದ ಮೇಲೆ ಅವರ ಅಭಿಮಾನಿಗಳ ಸಂತಸ ಹೆಚ್ಚಾಗುವುದು