ಕೊರೋನಾ ಲಸಿಕೆ ಪಡೆದುಕೊಂಡ ಶ್ರೀಮುರಳಿ, ಆಶಿಕಾ ರಂಗನಾಥ್

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (10:32 IST)
ಬೆಂಗಳೂರು: ನಟ ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್ ನಿನ್ನೆ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ.

 
18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಿಸುವ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ಹಲವು ಸ್ಯಾಂಡಲ್ ವುಡ್ ಕಲಾವಿದರು ಲಸಿಕೆ ಪಡೆದುಕೊಂಡಿದ್ದಾರೆ. ಮದಗಜ ಸಿನಿಮಾ ನಾಯಕ-ನಾಯಕಿಯಾಗಿರುವ ಶ್ರೀಮುರಳಿ, ಆಶಿಕಾ ಕೂಡಾ ಲಸಿಕೆ ಪಡೆದುಕೊಂಡಿದ್ದಾರೆ.
 
ಶ್ರೀಮುರಳಿ ಈಗಾಗಲೇ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಸಿಕೆ ಪಡೆದುಕೊಂಡ ಬಳಿಕ ಸಂದೇಶ ಬರೆದಿರುವ ಅವರು ನನ್ನದು ಮೊದಲ ಡೋಸ್ ಆಗಿದೆ. ನೀವೂ ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :