Widgets Magazine

ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಜತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟನ ಫೋಟೋ ವೈರಲ್

ಬೆಂಗಳೂರು| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (09:12 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ವೀರೇನ್ ಖನ್ನಾ ಜತೆ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 


ವೀರೇನ್ ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈತನ ಪಾರ್ಟಿಯಲ್ಲಿ ಸಂಜನಾ, ರಾಗಿಣಿ ಭಾಗಿಯಾಗುತ್ತಿದ್ದರು ಎನ್ನಲಾಗಿತ್ತು. ಇದೀಗ ವೀರೇನ್ ಜತೆಗಿರುವ ಶ್ರೀನಗರ ಕಿಟ್ಟಿ ಫೋಟೋ ವೈರಲ್ ಆಗಿದ್ದು, ಕಿಟ್ಟಿಗೂ ಈತನ ಜತೆ ಸಂಪರ್ಕವಿದೆಯೇ ಎಂಬ ಚರ್ಚೆ ನಡೆದಿದೆ. ಈ ನಡುವೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಮತ್ತಷ್ಟು ದೊಡ್ಡವರ ಹೆಸರುಗಳು ಬಹಿರಂಗವಾಗಲಿದೆ ಎಂದಿದ್ದಾರೆ. ಹೀಗಾಗಿ ಎಲ್ಲರಲ್ಲೂ ಟೆನ್ ಷನ್ ಶುರುವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :