ಮಂಗಳೂರು: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಮೂಲದ ‘ಪುಷ್ಪ’ ಸಿನಿಮಾದ ಹಾಡು ಶ್ರೀವಲ್ಲಿ ಸಿಗ್ನೇಚರ್ ಸ್ಟೆಪ್ಸ್ ನ್ನು ಹಲವರು ರೀಲ್ಸ್ ಮಾಡಿದ್ದರು. ಆದರೆ ಈಗ ಶ್ರೀವಲ್ಲಿ ಹಾಡಿನ ಮೋಡಿ ಯಕ್ಷಗಾನದ ರಂಗಸ್ಥಳಕ್ಕೂ ತಲುಪಿದೆ.ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟವೊಂದರಲ್ಲಿ ಭಾಗವತರು ಶ್ರೀವಲ್ಲಿ ಹಾಡಿನ ಕನ್ನಡ ಅವತರಣಿಕೆಯನ್ನು ಹಾಡುತ್ತಾರೆ. ಇದಕ್ಕೆ ಹಾಸ್ಯ ಕಲಾವಿದ ಶ್ರೀವಲ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ರಂಗಸ್ಥಳದಲ್ಲಿ ಕುಣಿದು ನೋಡುಗರನ್ನು ರಂಜಿಸಿದ್ದಾರೆ.ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್