Widgets Magazine

ಎಲ್ಲಿದ್ದೆ ಇಲ್ಲಿ ತನಕ ರಿಲೀಸ್ ಡೇಟ್ ಘೋಷಿಸಿದ ಸೃಜನ್ ಲೋಕೇಶ್

ಬೆಂಗಳೂರು| Krishnaveni K| Last Modified ಶನಿವಾರ, 21 ಸೆಪ್ಟಂಬರ್ 2019 (09:04 IST)
ಬೆಂಗಳೂರು: ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ ನಟಿಸಿರುವ ಸಿನಿಮಾ ರಿಲೀಸ್ ಡೇಟ್ ನ್ನು ನಟ ಸೃಜನ್ ಲೋಕೇಶ್ ಅನೌನ್ಸ್ ಮಾಡಿದ್ದಾರೆ.

 
ಎಲ್ಲಿದ್ದೆ  ಇಲ್ಲಿ ತನಕ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಸೃಜನ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.
 
ಈ ಸಿನಿಮಾ ಈಗ ಸೆನ್ಸಾರ್ ನಲ್ಲಿ ಯಾವುದೇ ಕತ್ತರಿ ಪ್ರಯೋಗಕ್ಕೊಳಗಾಗದೇ ಪಾಸ್ ಆಗಿದ್ದು ಯು/ಎ ಸರ್ಟಿಫಿಕೇಟ್ ಪಡೆದಿದೆ. ಅಕ್ಟೋಬರ್ 11 ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಸೃಜನ್ ಘೋಷಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :