ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕ ಸಾವಿನ ಬಳಿಕ ಮೇಘನಾ ಸರ್ಜಾ ಹೊರಗೆಲ್ಲೂ ಕಾಣಿಸಿಕೊಂಡಿದ್ದೇ ಅಪರೂಪ. ಬೇಸರದಲ್ಲಿರುವ ಮೇಘನಾರನ್ನು ಸಾಂತ್ವನಿಸಲು ಈಗ ಅವರ ಚಿತ್ರರಂಗದ ಗೆಳತಿಯರು ಪ್ರಯತ್ನಪಟ್ಟಿದ್ದಾರೆ. ಮೇಘನಾ ಮನೆಗೆ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಭೇಟಿ ನೀಡಿ ಮೇಘನಾ ಜತೆ ಕಲೆ ಹೊತ್ತು ಕಳೆದು ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಮೇಘನಾ ಸದ್ಯಕ್ಕೆ ತವರು ಮನೆಯಲ್ಲಿ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜತೆಗಿದ್ದಾರೆ.