ಯುವರತ್ನ ಪ್ರೇರಣೆಯಿಂದ ಶಿಕ್ಷಕರಿಗೆ ಸನ್ಮಾನಿಸಿದ ಅಭಿಮಾನಿಗಳು

ಬೆಂಗಳೂರು| Krishnaveni K| Last Modified ಬುಧವಾರ, 7 ಏಪ್ರಿಲ್ 2021 (09:04 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸಿನಿಮಾದಲ್ಲಿ ಬರುವ ಕೆಲವು ಅಂಶಗಳು ಹಲವರಿಗೆ ಪ್ರೇರಣೆಯಾಗುತ್ತಿದೆ. ಇದಕ್ಕೀಗ ಮತ್ತೊಂದು ಸೇರ್ಪಡೆಯಾಗುತ್ತಿದೆ.

 
ಯುವರತ್ನ ಸಿನಿಮಾವನ್ನು ವೀಕ್ಷಿಸಿದ ವಿದ್ಯಾರ್ಥಿಗಳ ಬಳಗವೊಂದು ಥಿಯೇಟರ್ ನಲ್ಲಿ ತಮ್ಮ ಶಿಕ್ಷಕರನ್ನು ಸನ್ಮಾನಿಸಿದ ಘಟನೆ ನಡೆದಿದೆ. ಈ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಸಾಮಾಜಿಕ ಸಂದೇಶ ನೀಡಲಾಗಿದೆ. ಹೀಗಾಗಿ ಇದರಿಂದ ಪ್ರೇರಣೆಗೊಂಡು ವಿದ್ಯಾರ್ಥಿ ಸಮೂಹವೊಂದು ಶಿಕ್ಷಕರನ್ನು ಗೌರವಿಸಿದೆ.
 
ಮೊನ್ನೆಯಷ್ಟೇ ಅಭಿಮಾನಿ ದಂಪತಿಯೊಬ್ಬರು ತಮ್ಮ ತೀರಿಕೊಂಡ ಮಗನ ನೆನಪಿನಲ್ಲಿ ಟಿಕೆಟ್ ಖರೀದಿಸಿ ಆತನಿಗಾಗಿ ಮೀಸಲಿರಿಸಿದ ಆಸನದಲ್ಲಿ ಆತನ ಫೋಟೋ ಇಟ್ಟುಕೊಂಡು ಸಿನಿಮಾ ವೀಕ್ಷಿಸಿದ್ದರು. ಇದಕ್ಕೆ ಸ್ವತಃ ಪುನೀತ್ ಧನ್ಯವಾದ ಸಲ್ಲಿಸಿದ್ದರು.
ಇದರಲ್ಲಿ ಇನ್ನಷ್ಟು ಓದಿ :