ಕಾಂತಾರ ಚಿತ್ರಕ್ಕೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರ ಕುರಿತು ರಿಯಲ್ ಸ್ಟಾರ್ ಉಪೇಂದ್ರ ರಿಯಾಕ್ಷನ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂತಹ ವಿಚಾರಗಳನ್ನ ನಿರ್ಲಕ್ಷ್ಯ ಮಾಡಬೇಕು, ಈ ವಿಚಾರಗಳ ಬಗ್ಗೆ ಮಾತನಾಡಿದಷ್ಟೂ ಬೆಳೆಯುತ್ತಾ ಹೋಗುತ್ತೆ, ನಾವೇ ಬೆಂಕಿಗೆ ತುಪ್ಪ ಸುರಿಯುತ್ತಿದ್ದೀವಿ.. ಇಂತ ವಿಚಾರಗಳನ್ನ ಇಗ್ನೋರ್ ಮಾಡಬೇಕು. ವೈಯಕ್ತಿಕ ನಂಬಿಕೆಗಳನ್ನು ಇಟ್ಟುಕೊಂಡು ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯವಾಗುತ್ತೆ. ಇವತ್ತಿಗೂ ನಾವು ನಂಬಿಕೆಗಳನ್ನು ಬಹಳ ನಂಬುತ್ತೇವೆ. ನಮ್ಮ ಮನೆಯಲ್ಲಿ ನಮ್ಮ ತಂದೆ ಇವತ್ತಿಗೂ