ಬೆಂಗಳೂರು : ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸುವ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇದೀಗ ಅಭಿಮಾನಿಯೊಬ್ಬರ ತಾಯಿಯ ಚಿಕಿತ್ಸೆಗೆ ನೆರವು ನೀಡಿದ್ದಾರೆ. ಟ್ವಿಟರ್ನಲ್ಲಿ ಆಕ್ಟಿವ್ ಆಗಿರೋ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟರ್ ಅಕೌಂಟ್ನಲ್ಲಿ ತಾಯಿ ಸ್ತನದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಧನ ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ತಾಯಿಗೆ ಈಗಾಗಲೆ ಎರಡು ಸಲ ಆಪರೇಷನ್ ಮಾಡಿಸಿದ್ದು, ಮತ್ತೊಮ್ಮೆ ರೋಗ ಉಲ್ಬಣಿಸಿದೆ. ಮತ್ತೊಮ್ಮೆ ಆಪರೇಷನ್ ಮಾಡಿಸಲು ವೈದ್ಯರು ಹೇಳಿದ್ದಾರೆ.