ಪುನೀತ್ ಇನ್ನಿಲ್ಲ ಎಂಬ ಮಾತನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಅದನ್ನು ಒಪ್ಪಿಕೊಂಡು ಬದುಕು ಸಾಗಿಸಲೇಬೇಕಿದೆ. ಅವರನ್ನು ಕಳೆದುಕೊಂಡ ಸ್ನೇಹಿತರು, ಸೆಲೆಬ್ರಿಟಿಗಳು ಪರಿಪರಿಯಾಗಿ ನೋವು ಅನುಭವಿಸುತ್ತಿದ್ದಾರೆ. ಬಾಲ್ಯದಿಂದಲೂ ಪುನೀತ್ ಜೊತೆ ಗೆಳೆತನ ಹೊಂದಿದ್ದ ಕಿಚ್ಚ ಸುದೀಪ್ ಅವರು ಈ ಘಟನೆಯಿಂದ ವಿಚಲಿತರಾಗಿದ್ದಾರೆ. ಅಗಲಿದ ಗೆಳೆಯನ ಬಗ್ಗೆ ಅವರು ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಸುದೀಪ್ ಅವರು ಭಾವುಕವಾಗಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಎಲ್ಲವೂ ಮುಗಿದಿದೆ. ಸಹಜ ಸ್ಥಿತಿಯಲ್ಲಿ ಬರಲು ಇನ್ನೂ ಸ್ವಲ್ಪ