ಸುದೀಪ್, ಪುನೀತ್, ಶಿವರಾಜ್ ಕುಮಾರ್ ಬಗ್ಗೆ ಬಂದ ಸುದ್ದಿ ಕನ್ ಫರ್ಮ್ ಆಯ್ತು!

ಬೆಂಗಳೂರು| Krishnaveni K| Last Modified ಭಾನುವಾರ, 15 ಆಗಸ್ಟ್ 2021 (11:48 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ 124 ನೇ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್,  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಕನ್ ಫರ್ಮ್ ಆಗಿದೆ.
 > ಆಗಸ್ಟ್ 17 ರಂದು ನಗರದ ಪಂಚತಾರಾ ಹೋಟೆಲ್ ನಲ್ಲಿ ಮುಹೂರ್ತ ಕಾರ್ಯಕ್ರಮ ಬೆಳಿಗ್ಗೆ 7.45 ಕ್ಕೆ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ಹಾಗೂ ಸುದೀಪ್ ಅತಿಥಿಗಳಾಗಲಿದ್ದಾರೆ.>   ರಾಮ್ ದುಲಿಪುಡಿ ಸಾರಥ್ಯದಲ್ಲಿ ಬರಲಿರುವ ಸಿನಮಾ ಬಗ್ಗೆ ಶಿವಣ್ಣ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಇದರ ಟೈಟಲ್ ಕೂಡಾ ಇದೇ ದಿನ ಲಾಂಚ್ ಆಗಲಿದೆ.ಇದರಲ್ಲಿ ಇನ್ನಷ್ಟು ಓದಿ :