75ನೇ ಸ್ವಾತಂತ್ರ್ಯ ದಿನಾಚರಣೆಯ (75th Independence Day) ಸುಸಂದರ್ಭದಲ್ಲಿ, ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ಶುಭ ಕೋರಿದ್ದಾರೆ. ಕೆಲವರು ತಮ್ಮ ವಿಡಿಯೋಗಳ ಮೂಲಕ ವಿಶ್ ಮಾಡಿದರೆ, ಕಿಚ್ಚ ಸುದೀಪ್ ರಾಷ್ಟ್ರಗೀತೆ ಹಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ನಿನ್ನೆ ಸುದೀಪ್ ಅವರು ಹಂಚಿಕೊಂಡ ವಿಶೇಷ ವಿಡಿಯೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚಿಕೊಂಡಿದ್ದರು. ಆದರೆ ರಾಷ್ಟ್ರಗೀತೆ ಹಾಡುವಾಗ ಸುದೀಪ್ ಅವರು ಮಾಡಿರುವ ಒಂದು ತಪ್ಪು