ಬೆಂಗಳೂರು: ತಮ್ಮ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಚಿತ್ರರಸಿಕರ ಮನಗೆದ್ದ ನಟಿ ಸುಧಾರಾಣಿ. ಈಗ ಇವರ ಮಗಳು ಬೆಳ್ಳಿತೆರೆಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂಗದ ಖಳನಾಯಕನ ಪಾತ್ರದಲ್ಲಿ ಪ್ರಖ್ಯಾತಿಯಾದ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರ ಇದು ಚಕ್ರವ್ಯೂಹಕ್ಕೆ ಸುಧಾರಾಣಿಯವರ ಮಗಳು ನಿಧಿ ಗೋವರ್ಧನ್ ಆಯ್ಕೆಯಾಗಿದ್ದಾರೆ. ನಟಿ ಸುಧಾರಾಣಿಯವರು ತಮ್ಮ 12ನೇ ವಯಸ್ಸಿನಲ್ಲಿ ಶಿವರಾಜ್ ಕುಮಾರ್ ಅಭಿನಯದ ಆನಂದ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.