ತಂದೆಯ ನೆನೆದು ಭಾವುಕರಾದ ಸುಧಾರಾಣಿ

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (10:14 IST)
ಬೆಂಗಳೂರು: ನಟಿ ಸುಧಾರಾಣಿ ತಂದೆ ಗೋಪಾಲಕೃಷ್ಣ ಮೊನ್ನೆಯಷ್ಟೇ ನಿಧನರಾಗಿದ್ದರು. ಇದೀಗ ಸುಧಾರಾಣಿ ತಮ್ಮ ತಂದೆಯ ಬಗ್ಗೆ ಭಾವುಕರಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
 

‘ಕಿಟ್ಟಿ ನೀವು ಅತ್ಯಂತ ಪರಿಶುದ್ಧ ವ್ಯಕ್ತಿ. ನೀವು ಮಾತಾಡೋದು ಕಡಿಮೆ. ಆದರೆ ಅತ್ಯಂತ ಶ್ರೇಷ್ಠ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿ. ನಿಮ್ಮ ಕೆಲವು ಉತ್ತಮ ಗುಣನಡತೆಗಳನ್ನು ನಾನು ಅಳವಡಿಸಿಕೊಳ್ಳಬಹುದು ಎಂದುಕೊಳ್ಳುತ್ತೇನೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುವ ಅಣ್ಣಾ..’ ಎಂದು ಸುಧಾರಾಣಿ ಭಾವುಕರಾಗಿ ತಂದೆಯ ಬಗ್ಗೆ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :