ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಈ ವಾರ ಬಿಡುಗಡೆಯಾಗಲಿದೆ. ಹೊಸಬರ ತಂಡ, ಹೊಸತನ ಹೊಂದಿರೋ ಕಥೆಯ ಹೊಳಹಿನೊಂದಿಗೇ ಈ ಚಿತ್ರ ಸೃಷ್ಟಿಸಿರೋ ಅಚ್ಚರಿದಾಯಕ ಕ್ರೇಜ್ ಬಲವಾಗಿಯೇ ಇದೆ. ಹೊಸಾ ತಂಡದಿಂದಲೇ ರೂಪಿಸಲ್ಪಟ್ಟಿರೋ ಈ ಚಿತ್ರ ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಪ್ರೇಕ್ಷಕರಲ್ಲಿ ಭರವಸೆ ಹುಟ್ಟು ಹಾಕಿದೆ. ಇಂಥಾ ಅಗಾಧ ನಿರೀಕ್ಷೆಗಳೊಂದಿಗೆ ಈ ಚಿತ್ರ ಹನ್ನೆರಡನೇ ತಾರೀಕು ಅಂದರೆ ಇದೇ ವಾರ ತೆರೆಗಾಣುತ್ತಿದೆ. ಚಿತ್ರಕಥಾ ಅನ್ನೋದು ಯಾವ ಜಾನರಿನ ಚಿತ್ರ