ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಮತ್ತು ಸುಹಾಸಿನಿ ಪುತ್ರ ನಂದನ್ ಇಟಲಿಯಲ್ಲಿ ದರೋಡೆಗೆ ಒಳಗಾಗಿದ್ದಾರೆ. ಸರಣಿ ಟ್ವಿಟ್`ಗಳಲ್ಲಿ ಸುಹಾಸಿನಿ ಮಣಿರತ್ನಂ ಮಗನ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಬೆಲ್ಲುನೋದಲ್ಲಿ ನನ್ನ ಮಗ ನಂದನ್`ನನ್ನ ದರೋಡೆ ಮಾಡಲಾಗಿದ್ದು, ಅವನು ಏರ್`ಪೋರ್ಟ್`ಗೆ ತೆರಳಲು ಸಹಾಯ ಮಾಡಿ. ವೆನೀಸ್ ಏರ್`ಪೋರ್ಟ್ ಬಳಿ ಯಾರಾದರೂ ಭಾರತೀಯರಿದ್ದರೆ. ನನ್ನ ಮಗನಿಗೆ ಸಹಾಯ ಮಾಡಿ ಎಂದು ಸರಣಿ ಟ್ವೀಟ್ ಮಾಡಿದ್ದರು.