ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಜನರು ನೆರೆಯಿಂದ ತತ್ತರಿಸುತ್ತಿದ್ದರೆ ಇತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಚಿರಂಜೀವಿ ಜತೆ ಡ್ಯಾನ್ಸ್ ಮಾಡುತ್ತಿದ್ದರು ಎಂದು ಟ್ರೋಲ್ ಮಾಡಿದವರಿಗೆ ಸುಮಲತಾ ಅಂಬರೀಶ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.ಸುಮಲತಾ ಅಂಬರೀಶ್ ಚಿರಂಜೀವಿ ಜತೆ ಡ್ಯಾನ್ಸ್ ಮಾಡುವ ಹಳೆಯ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಟೀಕಾ ಪ್ರಹಾರ ನಡೆಸಿದ್ದರು. ಇದಕ್ಕೆ ಇದೀಗ ಸುಮಲತಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕವೇ ಯಾರ ವಿರುದ್ಧವೂ ನೇರವಾಗಿ ಟೀಕೆ ಮಾಡದೇ ತಕ್ಕ ಉತ್ತರ