ಸ್ಯಾಂಡಲ್ ವುಡ್`ನ ಸೂಪರ್ ಸ್ಟಾರ್`ಗಳಾದ ಸುದೀಪ್ ಮತ್ತು ದರ್ಶನ್ ನಡುವಿನ ವಿವಾದ ಬಿರುಗಾಳಿ ಬಂದುಹೋಗಿದ್ದು, ಎಲ್ಲರಿಗೂ ಗೊತ್ತೇ ಇದೆ. ಚಲನಚಿತ್ರ ರಂಗದ ಹಿರಿಯ ನಟ ಅಂಬರೀಷ್ ಒಬ್ಬರಿಂದ ಮಾತ್ರ ಅವರಿಬ್ಬರ ನಡುವೆ ಉಂಟಾಗಿರುವ ಮನಸ್ತಾಪ ಬಗೆಹರಿಸಲು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಂತೆ ಕುಮಾರ್ ಎಂಬ ಅಭಿಮಾನಿ ದರ್ಶನ್ ಮತ್ತು ಸುದೀಪ್ ಅವರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಅಂಬರೀಶ್ ಮನವೊಲಿಸಿ ಎಂದು ಸುಮಲತಾ ಅಂಬರೀಷ್ ಅವರಿಗೆ ಟ್ವೀಟ್ ಮಾಡಿದ್ದಾನೆ.