ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಹೋರಾಟ ಮಾಡಲು ಹೊರಟಿರುವ ಅವರ ಅಭಿಮಾನಿ ಸಂಘಗಳಿಗೆ ಸುಮಲತಾ ಅಂಬರೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ಮನೆ ಮಗನಂತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ದುಃಖವನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ. ಅದರ ನಡುವೆ ಅವರ ಹೆಸರು ಹೇಳಿಕೊಂಡು ಅವರ ಸ್ಮಾರಕ ಅಭಿವೃದ್ಧಿಯಾಗಬೇಕು, ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಕಟವಾಗಬೇಕು ಎಂದೆಲ್ಲಾ ಕೆಲವು ಸಂಘಟನೆಗಳು ಹೋರಾಟ ಮಾಡಲು ತೀರ್ಮಾನ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.ಎಲ್ಲರೂ ಸಂಕಷ್ಟದಲ್ಲಿರುವಾಗ ಹೋರಾಟ ಮಾಡುವುದು