ಬೆಂಗಳೂರು: ಅಂಬರೀಶ್ ನಿಧನದ ನಂತರ ಮಂಡ್ಯ ಕಾಂಗ್ರೆಸ್ ನ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದೆ. ರೆಬಲ್ ಸ್ಟಾರ್ ರಿಂದ ತೆರವಾದ ಸ್ಥಾನಕ್ಕೆ ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ.ಅಂಬರೀಶ್ ನಂತರ ರಾಜಕೀಯಕ್ಕೆ ಬರುವ ಬಗ್ಗೆ ತಮ್ಮ ಮೇಲೆ ಅಭಿಮಾನಿಗಳು ಒತ್ತಾಯ ಹೇರುತ್ತಿರುವುದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ನಾನು ಏನನ್ನೂ ನಿರ್ಧರಿಸಿಲ್ಲ. ಮಂಡ್ಯದ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಯಾವುದನ್ನೂ ತೀರ್ಮಾನಿಲ್ಲ. ಅಷ್ಟಕ್ಕೂ ಎಲ್ಲವನ್ನೂ