ಮೈಷುಗರ್ ಫ್ಯಾಕ್ಟರಿಯಲ್ಲಿ ಅಭಿಷೇಕ್ ಶೂಟಿಂಗ್ ವಿವಾದ: ಸುಮಲತಾ ಹೇಳಿದ್ದೇನು?

ಮಂಡ್ಯ| Krishnaveni K| Last Modified ಗುರುವಾರ, 21 ಜನವರಿ 2021 (10:03 IST)
ಮಂಡ್ಯ: ಮಂಡ್ಯದ ಮೈ ಷುಗರ್ ಫ್ಯಾಕ್ಟರಿಯಲ್ಲಿ ಅಭಿಷೇಕ್ ಅಂಬರೀಶ್ ಸಿನಿಮಾ ಶೂಟಿಂಗ್ ಮಾಡಿರುವ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಅವರ ತಾಯಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
 

ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಶೂಟಿಂಗ್ ಮಾಡಿದರೆ ಅದು ತಪ್ಪು ಎಂದಾದರೆ ಕೆಆರ್ ಎಸ್, ಮೈಸೂರಿನ ಹಲವು ಕಡೆ ಹಿಂದಿನಿಂದಲೂ ಶೂಟಿಂಗ್ ನಡೆಯುತ್ತಾ ಬಂದಿದೆ. ಇದು ತಪ್ಪಾ? ಶೂಟಿಂಗ್ ಮಾಡಿದ ತಕ್ಷಣ ಆ ಜಾಗ ನಮ್ಮದಾಗುತ್ತಾ? ಮಂಡ್ಯದಲ್ಲಿ ಯಾವ ಕೈಗಾರಿಕೆಗಳೂ ಬರಬಾರದು, ಶೂಟಿಂಗ್ ನಡೆಯಬಾರದು ಎಂದರೆ ಮಂಡ್ಯಕ್ಕೆ ಯಾರು ಬರ್ತಾರೆ? ಶೂಟಿಂಗ್ ನಡೆದರೆ ಅಲ್ಲಿನ ಸುತ್ತಮುತ್ತಲ ಪ್ರದೇಶ ವಾಣಿಜ್ಯವಾಗಿ ಸ್ವಲ್ಪ ಬೆಳೆಯುತ್ತೆ. ಆ ಜಾಗವನ್ನು ನೋಡಲು ಇನ್ನು ಯಾರೋ ಪ್ರವಾಸಿಗರು ಬರುತ್ತಾರೆ. ಇದೆಲ್ಲವೂ ಒಳ್ಳೆಯದಲ್ಲವೇ? ಎಂದು ಸುಮಲತಾ ಪ್ರಶ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :