ರೆಬಲ್ ಸ್ಟಾರ್ ಅಂಬರೀಶ್ ಪುಣ್ಯ ಸ್ಮರಣೆ: ಸುಮಲತಾ ಭಾವುಕ ಸಂದೇಶ

ಬೆಂಗಳೂರು| Krishnaveni K| Last Modified ಬುಧವಾರ, 24 ನವೆಂಬರ್ 2021 (09:26 IST)
ಬೆಂಗಳೂರು: ರೆಬಲ್‍ ಸ್ಟಾರ್ ಅಂಬರೀಶ್ ಸಾವನ್ನಪ್ಪಿ ಇಂದಿಗೆ ಮೂರು ವರ್ಷ ಕಳೆದಿದೆ. ಅಂಬಿ ಪುಣ್ಯತಿಥಿಯಂದು ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ನೀವು ನಮ್ಮ ಹೃದಯದಲ್ಲಿ, ಚಿಂತನೆಯಲ್ಲಿ ಮತ್ತು ಆತ್ಮದ ಜೊತೆಗೆ ಒಂದಾಗಿದ್ದೀರಿ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುವೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.


ನಿನ್ನೆಷ್ಟೇ ಸುಮಲತಾ ಅಂಬಿ ಪುಣ್ಯಸ್ಮರಣೆಯಂದು ಅವರ ಕೆಲವು ಅಭಿಮಾನಿ ಸಂಘಟನೆಗಳು ಸ್ಮಾರಕ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲು ಹೊರಟಿರುವುದನ್ನು ವಿರೋಧಿಸಿ ಸಂದೇಶ ನೀಡಿದ್ದರು. ಇಂದು ಸುಮಲತಾ ಮಾತ್ರವಲ್ಲದೆ, ಅಂಬಿ ಫ್ಯಾನ್ಸ್ ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕ ಅವರನ್ನು ಸ್ಮರಿಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :