‘ಸುರೈ ಪೊಟ್ರು’ ಚಿತ್ರದ ಈ ವಿಚಾರಕ್ಕೆ ಸಂತಸಗೊಂಡ ಸೂರ್ಯನ ಅಭಿಮಾನಿಗಳು

ಚೆನ್ನೈ| pavithra| Last Modified ಶನಿವಾರ, 21 ನವೆಂಬರ್ 2020 (13:19 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ ಅಭಿನಯದ ‘ಸುರೈ ಪೊಟ್ರು’ ಸಿನಿಮಾ ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಒಟಿಟಿಯಲ್ಲಿ  ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ಚಿತ್ರದ ಸಂಗ್ರಹ ಅತಿ ಹೆಚ್ಚಾಗುತ್ತಿತ್ತು ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ ಇದೀಗ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಅದೇನೆಂದರೆ ರಾಟ್ ಕ್ಲಿಫ್ ಐಎಂಡಿಬಿ ರೇಟಿಂಗ್ 8.7ರಷ್ಟಿದೆ. ಪ್ರಸ್ತುತ ಸೂರ್ಯ ಅವರ ‘ಸುರೈ ಪೊಟ್ರು’ ಚಿತ್ರ ದಾಖಲೆಯನ್ನು ಮುರಿದು ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದೆ. ಇದು ಅಭಿಮಾನಿಗಳ ಸಂತಸಕ್ಕೆ  ಕಾರಣವಾಗಿದ್ದು, ಅದಕ್ಕಾಗಿ ಉತ್ಸವ ಆಚರಿಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :