ಬೆಂಗಳೂರು : ಬಾರ್ ನೌಕರನ ಅಪಹರಣ, ಪ್ರಾಣ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲು ಸೇರಿರುವ ಸುನಾಮಿ ಕಿಟ್ಟಿ ಅವರಿಗೆ ಇದೀಗ ಕೋರ್ಟ್ ಜಾಮೀನು ನೀಡಿದೆ. ಸುನಾಮಿ ಕಿಟ್ಟಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿರುವ ಹಿನ್ನಲೆಯಲ್ಲಿ ಈ ಅರ್ಜಿಯನ್ನ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, 1 ಲಕ್ಷ ಮೊತ್ತದ ಬಾಂಡ್, ಒಬ್ಬರ ಭದ್ರತೆ ನೀಡಬೇಕು, ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ಮ್ಯಾಜಿಸ್ಟ್ರೇಟ್