ಬಾಲಿವುಡ್ ನಟಿ, ಮಾದಕ ಬೆಡಗಿ ಸನ್ನಿ ಲಿಯೋನ್ ಹೊಸ ಕಾರ್ ಕೊಂಡುಕೊಂಡಿದ್ದಾರೆ. ಅರೇ, ಇದರಲ್ಲಿ ಏನು ವಿಶೇಷ ಅಂತೀರಾ? ಸನ್ನಿ ಖರೀದಿಸಿರುವ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ. ಇಟಲಿಯ ಮಾಸೆರಾಟಿ ಗಿಬ್ಲಿ ಸೆಡಾನ್ ಕಾರ್ ಇದು ವಿಶ್ವದ ಪ್ರಮುಖ ಹಾಗೂ ದುಬಾರಿ ಬ್ರ್ಯಾಂಡ್ ನ ಕಾರ್ ಆಗಿದೆ. ಸನ್ನಿ ಲಿಯೋನ್ ಖರೀದಿ ಮಾಡಿರುವ ಹೊಸ ಗಿಬ್ಲಿ ಕಾರಿನ ಬೆಲೆ 1.31 ಕೋಟಿ ರೂಪಾಯಿಗಳಂತೆ.