ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ ನಲ್ಲಿ ವೀಕ್ಷಕರ ಬಹುದಿನಗಳ ಒತ್ತಾಸೆ ಕೊನೆಗೂ ನೆರವೇರುತ್ತಿದೆ. ರಾಜ್ಯ ಕಂಡ ಇಬ್ಬರು ಪೊಲೀಸ್ ಅಧಿಕಾರಿಗಳ ಜೀವನದ ಅನಾವರಣ ಈ ವಾರ ನಡೆಯಲಿದೆ.ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್ ಈ ವಾರ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಇವರ ಜೀವನದ ಸಾಧನೆಗಳನ್ನು ವೀಕ್ಷಿಸಬಹುದಾಗಿದೆ.ಈ ಇಬ್ಬರು ಸಾಧಕರು ಈ ವಾರದ ಅತಿಥಿಗಳು ಎಂದು ತಿಳಿಯುತ್ತಲೇ