ನೈರ್ಮಲ್ಯಯುತ ಜೀವನವನ್ನು ಸಾಗಿಸುವುದರ ಕುರಿತಾದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕಾರಣದಿಂದಾಗಿ 92.7ಬಿಗ್ ಎಫ್.ಎಮ್ ಬೆಂಗಳೂರು ಉತ್ತಮವಾದ ಉಪಕ್ರಮವೊಂದನ್ನು ಕೈಗೊಂಡಿದೆ. ಪ್ರತಿಯೊಂದು ಕುಟುಂಬಗಳಿಗೂ ನೈರ್ಮಲ್ಯತೆಯು ಅತ್ಯಗತ್ಯವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಬಿಗ್ ಎಫ್.ಎಮ್ ನ ನಿರೂಪಕಿ ಆರ್.ಜೆ ಶ್ರುತಿ ತಮ್ಮ ತಂಡ ಬಿಗ್ ಕಾಫಿ ಬ್ರಿಗೇಡ್ ನೊಂದಿಗೆ ವಿಂಗ್ಸ್ ಆಫ್ ವುಮೆನ್ ಎಂಬ ಉಪಕ್ರಮ ಯೋಜನೆಯನ್ನು ರೂಪಿಸಿದ್ದಾರೆ. ಈ ಉಪಕ್ರಮವು ಮಹಿಳೆಯರ ಸ್ವಾತಂತ್ರ್ಯ ಮತ್ತು ಮುಟ್ಟಿನ ಸಂದರ್ಭದಲ್ಲಿನ ನೈರ್ಮಲ್ಯತೆಯ