ಚೆನ್ನೈ: ಕಂಗುವಾ ಶೂಟಿಂಗ್ ವೇಳೆ ಗಾಯಗೊಂಡಿರುವ ನಟ ಸೂರ್ಯ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.ಕಂಗುವಾ ಶೂಟಿಂಗ್ ವೇಳೆ ಕ್ಯಾಮರಾ ಭುಜಕ್ಕೆ ಬಿದ್ದು ಸೂರ್ಯ ಗಾಯಗೊಂಡಿದ್ದರು. ಹೀಗಾಗಿ ಶೂಟಿಂಗ್ ಸ್ಥಗಿತಗೊಳಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಗಾಯವಾದ ಮಾಹಿತಿ ತಿಳಿದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.ಇದೀಗ ತಮ್ಮ ಅಭಿಮಾನಿಗಳಿಗೆ ಖುದ್ದಾಗಿ ಸೂರ್ಯ ಸೋಷಿಯಲ್ ಮೀಡಿಯಾ ಮೂಲಕವೇ ಮಾಹಿತಿ ನೀಡಿದ್ದಾರೆ. ಶೂಟಿಂಗ್ ವೇಳೆ ಅವರಿಗೆ ಆದ ಗಾಯ ಗಂಭೀರವಲ್ಲ