ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಹಲವು ಬಗೆಯ ಸುದ್ದಿಗಳು ಹರಿದಾಡುತ್ತಿವೆ.ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ರನ್ನು ಕೊಲ್ಲಲು ಸ್ಟನ್ ಗನ್ ಬಳಸಿರಬಹುದೆಂಬ ಸುದ್ದಿ ಕೇಳಿಬರತೊಡಗಿದ್ದು, ಇದಕ್ಕೆ ಪುರಾವೆ ಸಿಕ್ಕಿಲ್ಲ.ಈ ನಡುವೆ, ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಐ ಎನ್ ಐ (ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವಹಿಸಬೇಕೆಂದು ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹ ಮಾಡಿದ್ದಾರೆ.