Widgets Magazine

ತೆರೆಗೆ ಬರೋ ಮುನ್ನವೇ ಸಸ್ಪೆನ್ಸ್ ಬಯಲು

Navya K M| Last Modified ಶನಿವಾರ, 12 ಸೆಪ್ಟಂಬರ್ 2015 (11:36 IST)
ಬಾಲಿವುಡ್ ಸಿನಿಮಾಗಳಲ್ಲಿ ಸನ್ನಿ ಲಿಯೋನ್ ನನ್ನು ನೋಡಿ ಅಯ್ಯೋ ಇವಳು ಕನ್ನಡಕ್ಕಾದ್ರೂ ಬಾರಬಾರದ ಅಂತಾ ಬೇಸರಿಸಿಕೊಳ್ಳುತ್ತಿದ್ದ ಪಡ್ಡೆ ಹೈಕ್ಳಿಗೆ ಸಪ್ರೈಸ್ ಕೊಟ್ಟವರು ನಿರ್ದೇಶಕ ಇಂದ್ರಿಜಿತ್ ಲಂಕೇಶ್. ತಮ್ಮ ಐ ಲವ್ ಯೂ ಆಲಿಯಾದ ಮೂಲಕ ಸನ್ನಿ ಲಿಯೋನ್ ಅವರನ್ನು ಕನ್ನಡಕ್ಕೆ ಕರೆ ತಂದಿದ್ದರು. ಆದ್ರೆ ಸನ್ನಿ ಲಿಯೋನ್ ಅವರನ್ನು ಕರೆ ತಂದ ಇಂದ್ರಜಿತ್ ಅವರೇ ಈಗ ಪೇಚಾಡುವಂತಾಗಿದೆ.

ಐ ಲವ್ ಯೂ ಆಲಿಯಾ ಸಿನಿಮಾದಲ್ಲಿ ಸನ್ನಿ ಕಾಮಾಕ್ಷಿ ಕಾಮಾಕ್ಷಿ ಅನ್ನೋ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಥಿಯೇಟರ್ ನಲ್ಲಿ ಪ್ರೇಕ್ಷಕರು ನೋಡ್ಬೇಕು. ಅಲ್ಲಿವರೆಗೂ ಅಭಿಮಾನಿಗಳಲ್ಲಿ ಕುತೂಹಲ ಹಾಗೇ ಇರಬೇಕು ಅಂದಿದ್ದರು. ಆದ್ರೆ ಇಂದ್ರಜಿತ್ ಅವರು ಮಾಡಿದ್ದ ಪ್ಲಾನ್ ಈಗ ಉಲ್ಟಾ ಹೊಡೆದಿದೆ. ಯಾವ ಹಾಡನ್ನು ಥಿಯೇಟರ್ ನಲ್ಲೇ ಅಭಿಮಾನಿಗಳು ನೋಡಬೇಕು ಅಂತಾ ಇಂದ್ರಜಿತ್ ಅಂದುಕೊಂಡಿದ್ದರೋ ಅದೇ ಕೆಂಡ ಹಾಡು ಈಗ ಸಾಮಾಜಿಕ ಜಾಲ ತಾಣಗಳಲ್ಲಿ, ಮೊಬೈಲ್, ವಾಟ್ಸಾಫ್‌ಗಳಲ್ಲಿ ಹರಿದಾಡುತ್ತಿದೆ. 
 
ಇಂದ್ರಜಿತ್ ಲಂಕೇಶ್ ಸಾಂಗ್ ಶೂಟಿಂಗ್ ವೇಳೆಯೇ ಈ ಹಾಡನ್ನು ಯಾರೂ ಕೂಡ ರೆಕಾರ್ಡ್ ಮಾಡಿಕೊಳ್ಳಬಾರದು ಎಂದಿದದರಂತೆ. ಆದ್ರೂ ಯಾರೂ ಸುಮಾರು ಒಂದೂವರೆ ನಿಮಿಷಗಳಿರುವ ಹಾಡಿನ ತುಣುಕನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಮತ್ತೊಂದು ಸಪ್ರೈಸ್ ಕೊಡಬೇಕು ಅಂತಾ ಖುಷಿಯಲ್ಲಿದ್ದ ಇಂದ್ರಜಿತ್ ಅವರಿಗೆ ತುಂಬಾನೇ ಬೇಸರವಾಗಿದೆಯಂತೆ.



ಇದರಲ್ಲಿ ಇನ್ನಷ್ಟು ಓದಿ :