ಬಿಡುಗಡೆಗೂ ಮೊದಲೇ ಚಿರಂಜೀವಿ ಅಭಿನಯದ ಸೈ ರಾ ನರಸಿಂಹ ರೆಡ್ಡಿ ಇಷ್ಟೊಂದು ದುಡ್ಡು ಕೊಳ್ಳೆ ಹೊಡೆದಿದೆ ನೋಡಿ!

ಹೈದರಾಬಾದ್| Krishnaveni K| Last Modified ಬುಧವಾರ, 11 ಸೆಪ್ಟಂಬರ್ 2019 (09:21 IST)
ಹೈದರಾಬಾದ್: ಕೆಲವೊಂದು ಸಿನಿಮಾ ಬಿಡುಗಡೆಗೂ ಮೊದಲೇ ಸದ್ದು ಮಾಡುತ್ತದೆ ಎನ್ನುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೈ ರಾ ನರಸಿಂಹ ರೆಡ್ಡಿ ಚಿತ್ರ ಸಾಕ್ಷಿ.

 
ತೆಲುಗು, ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಲಿಗುರವ ಸೈ ರಾ ಸಿನಿಮಾ ಬಿಡುಗಡೆಗೂ ಮೊದಲೇ ಬರೋಬ್ಬರಿ 40 ಕೋಟಿ ರೂ. ಬಾಚಿದೆ ಎಂಬ ಸುದ್ದಿ ಬಂದಿದೆ.
 
ಕನ್ನಡ ನಟ ಕಿಚ್ಚ ಸುದೀಪ್, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೈ ರಾ ಸಿನಿಮಾದ ಟ್ರೈಲರ್ ಈಗಾಗಲೇ ಭಾರೀ ಹಿಟ್ ಆಗಿದೆ. ಸ್ವಾತಂತ್ರ್ಯ ಪೂರ್ವ ಕತೆಯುಳ್ಳ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಆದರೆ ಅದಕ್ಕಿಂತ ಮೊದಲೇ ಸಿನಿಮಾದ ಡಿಜಿಟಲ್ ಅಮೆಝೋನ್ ಪ್ರೈಮ್ ವಿಡಿಯೋಸ್ ಗೆ 40 ಕೋಟಿ ರೂ. ಗೆ ಮಾರಾಟವಾಗಿದೆ ಎಂಬ ಸುದ್ದಿ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :