ನಟ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು ನಟನೆ? ಯಾವ ಸಿನಿಮಾ?

ಮುಂಬೈ| Jagadeesh| Last Modified ಮಂಗಳವಾರ, 15 ಸೆಪ್ಟಂಬರ್ 2020 (22:50 IST)
ಬಾಲಿವುಡ್ ನಟ ಶಾರುಖ್ ಖಾನ್ ಜೊತೆಗೆ ನಟಿ ತಾಪ್ಸಿ ಪನ್ನು ಹೊಸ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ.

ರಾಜ್‌ಕುಮಾರ್ ಹಿರಾನಿ ಅವರ ಮುಂದಿನ ಚಿತ್ರದಲ್ಲಿ ಶಾರುಖ್ ಖಾನ್ ಎದುರು ತಾಪ್ಸಿ ಪನ್ನು ನಟಿಸಲಿದ್ದಾರೆ.

ವಿಶೇಷವೆಂದರೆ, ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಮತ್ತು ತಾಪ್ಸಿ ಪನ್ನು ಅವರು ಬದ್ಲಾ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

ಬಹುಮುಖ ಮತ್ತು ಪ್ರತಿಭಾನ್ವಿತ ನಟಿ, ತಾಪ್ಸೀ ಪನ್ನು ಬಾಲಿವುಡ್‌ನಲ್ಲಿ ಬಹಳ ಹೆಸರು ಮಾಡುತ್ತಿದ್ದಾರೆ.
ಮನ್ಮಾರ್ಜಿಯಾನ್, ಬದ್ಲಾ, ಸಾಂಡ್ ಕಿ ಆಂಖ್, ಪಿಂಕ್, ಥಪ್ಪಾದ್, ಮಿಷನ್ ಮಂಗಲ್, ನಾಮ್ ಶಬಾನಾ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಅಭಿಮಾನಿ ಬಳಗ ಹೊಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :