ಚಿತ್ರಕಥಾ: ಮತ್ತೆ ಬಾರಿನಲ್ಲಿ ತಬಲದ ಸೌಂಡು!

ಬೆಂಗಳೂರು, ಗುರುವಾರ, 11 ಜುಲೈ 2019 (14:05 IST)

ತಬಲಾ ನಾಣಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಮ್ಯಾನರಿಸಂ ಮತ್ತು ಬೇರೆಯದ್ದೇ ಥರದ ಪಾತ್ರಗಳ ಮೂಲಕ ಹೆಸರುವಾಸಿಯಾಗಿರೋ ನಟ. ಸದ್ಯ ಬಹು ಬೇಡಿಕೆಯಲ್ಲಿರುವ ನಾಣಿ ನಶೆಯ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡವರು. ಅವರೀಗ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಕಥಾ ಚಿತ್ರದಲ್ಲಿಯೂ ವಿಶಿಷ್ಟವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
chitrakataha
ತಬಲಾ ನಾಣಿ ಇತ್ತೀಚಿನ ದಿನಗಳಲ್ಲಿ ತಮ್ಮ ಟ್ರೇಡ್ ಮಾರ್ಕಿನಂತಿರೋ ನಶೆಯ ಪಾತ್ರದಿಂದ ಬೇರೆ ವೆರೈಟಿಗಳತ್ತ ಹೊರಳಿಕೊಂಡಿದ್ದರು. ಆದರೆ ನವ ನಿರ್ದೇಶಕ ಯಶಸ್ವಿ ಮತ್ತೆ ತಬಲಾ ನಾಣಿಯವರಿಗೆ ನಶೆಯೇರಿಸಿದ್ದಾರೆ. ಈ ಕಾರಣದಿಂದಲೇ ನಾಣಿ ಮತ್ತೆ ಕುಡುಕನ ಪಾತ್ರ ಮಾಡಿದ್ದಾರೆ. ಈ ಮೂಲಕ ಮತ್ತೊಂದು ಸುತ್ತು ಬಾರಿನಲ್ಲಿ ತಬಲಾ ಸೌಂಡು ಕೇಳಿಸಲಿದೆ. ಹಾಗಂದಾಕ್ಷಣ ಇದು ನಾಣಿ ಈವರೆಗೆ ನಿರ್ವಹಿಸಿಕೊಂಡು ಬಂದಿರೋ ಪಾತ್ರಗಳಿಗೂ ಚಿತ್ರಕಥಾ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆಯಂತೆ.
 
ಬಾರಿನೊಳಗೆ ತೂರಿಕೊಂಡು ಮಿಕಗಳಿಗಾಗಿ ಹೊಂಚು ಹಾಕಿ ಯಾರಿಂದಲೋ ಎಣ್ಣೆ ಸೇವೆ ಮಾಡಿಸಿಕೊಂಡು ಟೈಟಾಗೋದು ನಾಣಿ ಪಾತ್ರದ ಮಹಾತ್ಮೆ. ಕಡೆಗೆ ಎಣ್ಣೆ ಹೊಡೆಸಿದವರಿಗೆ ಅಮೂಲ್ಯ ಮಾತುಗಳನ್ನು ಹೇಳೋ ಮೂಲಕ ಋಣ ಸಂದಾಯ ಮಾಡೋದು ಈ ಪಾತ್ರದ ಸ್ಪೆಷಾಲಿಟಿ. ಹೀಗೆಯೇ ಯಾವುದೋ ಹತಾಶೆಯಿಂದ ನಾಯಕನೂ ಬಾರು ಸೇರಬೇಕಾಗಿ ಬರುತ್ತೆ. ಆ ಆ ದಿನದ ನಾಣಿಯ ಎಣ್ಣೆ ಸೇವಾಕರ್ತನಾಗುತ್ತಾನೆ. ಹಾಗೆ ಮುಖಾಮುಖಿಯಾದ ನಾಯಕನಿಗೆ ನಾಣಿ ಬದುಕಿನ ಸಾರದಂಥಾ ಮಾತುಗಳನ್ನು ಹೇಳುತ್ತಾರೆ. ಈ ಮಾತುಗಳೇ ಕಥೆಯ ದಿಕ್ಕು ಬದಲಾಗಲೂ ಕಾರಣವಾಗುತ್ತೆ. ಈ ಪಾತ್ರದಲ್ಲಿ ಅಂಥಾ ಮಜವೇನಿದೆ ಅನ್ನೋದು ಈ ವಾರವೇ ಗೊತ್ತಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರಕಥಾ: ಚಿತ್ರದಿಂದೆದ್ದು ಕೊಲ್ಲಲು ಹವಣಿಸೋ ಅಘೋರಿ!

ವಿಶಿಷ್ಟವಾದ ಕಥೆಯನ್ನು ಹೊಂದಿರುವ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣಲು ಸಜ್ಜುಗೊಂಡಿದೆ. ಯಶಸ್ವಿ ...

news

ಚಿತ್ರಕಥಾ ಮೂಲಕ ಮತ್ತೆ ಬಂದರು ಸುಧಾರಾಣಿ!

ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಈ ವಾರ ಬಿಡುಗಡೆಯಾಗಲಿದೆ. ಹೊಸಬರ ತಂಡ, ಹೊಸತನ ಹೊಂದಿರೋ ಕಥೆಯ ...

news

ರಚಿತಾ ರಾಮ್ ಮೇಲೆ ರಕ್ಷಿತಾ ಪ್ರೇಮ್ ಮುನಿಸಿಕೊಂಡಿದ್ದಾರಾ? ಕ್ರೇಜಿ ಕ್ವೀನ್ ಹೇಳಿದ್ದೇನು?

ಬೆಂಗಳೂರು: ಸಹೋದರ ರಾಣಾನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿರುವ ರಕ್ಷಿತಾ ಪ್ರೇಮ್ ಏಕ್ ಲವ್ಯಾ ಎಂಬ ...

news

ಅಭಿಮಾನಿಗಳ ಅಸಮಾಧಾನ ತಣಿಸಲು ಹೊಸ ಟ್ರೈಲರ್ ಬಿಡುಗಡೆ ಮಾಡಲಿರುವ ಕುರುಕ್ಷೇತ್ರ ಸಿನಿಮಾ ತಂಡ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಅಡಿಯೋ ರಿಲೀಸ್ ದಿನ ...