ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; ಜಯ ಯಾರಿಗೆ ಗೊತ್ತಾ?

ಚೆನ್ನೈ| pavithra| Last Modified ಮಂಗಳವಾರ, 24 ನವೆಂಬರ್ 2020 (10:37 IST)
ಚೆನ್ನೈ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆಯ  ಎಣಿಕೆ ಕಾರ್ಯ ನಿನ್ನೆ ಮುಕ್ತಾಯವಾಗಿದೆ.

ಭಾನುವಾರ ನಡೆದ ಚುನಾವಣೆಯಲ್ಲಿ ಡಿ.ರಾಜೇಂದರ್  ನೇತೃತ್ವದ ತಂಡ ಹಾಗೂ ತೆನಾಂಡಲ್ ಫಿಲ್ಮ್ಸ್  ಮುರಳಿ ನೇತೃತ್ವದ ತಂಡ ಸ್ಪರ್ಧಿಸಿದೆ. ಒಟ್ಟು ಚುನಾವಣೆಯಲ್ಲಿ 1,304 ಮತಗಳ ಪೈಕಿ 1.050 ಮತಗಳು ಮಾತ್ರ ಚಲಾಯಿಸಲ್ಪಟ್ಟವು ಎಂಬುದಾಗಿ ತಿಳಿದುಬಂದಿದೆ.

ನಿನ್ನೆ  ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆದಿದ್ದು, ಇದರಲ್ಲಿ  ಮುರಳಿ ನೇತೃತ್ವದ ತಂಡ 557 ಮತಗಳೊಂದಿಗೆ ಜಯಗಳಿಸಿದೆ. ಡಿ.ರಾಜೇಂದರ್  ನೇತೃತ್ವದ ತಂಡ 337 ಮತಗಳನ್ನು ಪಡೆದಿದ್ದಾರೆ. ಪಿ.ಎಲ್. ದೇನಪ್ಪನ್ ಕೇವಲ 87 ಮತಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :