ಬೆಂಗಳೂರು: ಸೂರಜ್-ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಆದರೆ ಮೊದಲ ದಿನವೇ ಮೈನ್ ಥಿಯೇಟರ್ ಸಂತೋಷ್ ಚಿತ್ರಮಂದಿರದಲ್ಲಿ ಸಮಸ್ಯೆಯಾಗಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ‘ಮೊದಲ ದಿನವೇ ಇಷ್ಟು ದೊಡ್ಡ ಸಮಸ್ಯೆ ಇಷ್ಟು ಸಣ್ಣ ಸಿನಿಮಾಗೆ ಹೊಡೆತ ತಡೆದುಕೊಳ್ಳಲು ಆಗಲ್ಲ. ಕಳೆದ ಮೂರು ದಿನಗಳಿಂದ ಇಲ್ಲಿ ಕರೆಂಟ್ ಇರಲಿಲ್ವಂತೆ. ಆದರೆ ನಮಗೆ ಯಾರಿಗೂ ಇದರ