Widgets Magazine

ಕೊರೋನಾ ತಡೆಗೆ ತೆಲುಗು ಸ್ಟಾರ್ ನಟರ ಭರ್ಜರಿ ಧನಸಹಾಯ: ಯಾವ ಸ್ಟಾರ್ ಕೊಡುಗೆ ಎಷ್ಟು?

ಹೈದರಾಬಾದ್| Krishnaveni K| Last Modified ಗುರುವಾರ, 26 ಮಾರ್ಚ್ 2020 (09:56 IST)
ಹೈದರಾಬಾದ್: ದೇಶದಲ್ಲಿ ಕೊರೋನಾ ರುದ್ರತಾಂಡವವಾಡುತ್ತಿದ್ದರೆ ಸರ್ಕಾರದ ರಕ್ಷಣೆ ಕಾರ್ಯಕ್ಕೆ ಸೆಲೆಬ್ರಿಟಿಗಳು ಧನ ಸಹಾಯ ಮಾಡುವ ಮೂಲಕ ಕೈಜೋಡಿಸಿದ್ದಾರೆ.

 
ಕೊರೋನಾದ ಪರಿಹಾರ ಕಾರ್ಯಗಳಿಗೆ ನೆರವಾಗಲು ತೆಲುಗು ಸ್ಟಾರ್ ನಟರು ಭರ್ಜರಿ ಧನಸಹಾಯ ಮಾಡಿದ್ದಾರೆ. ಅದರಲ್ಲಿ ಪವನ್ ಕಲ್ಯಾಣ್ ಮುಂಚೂಣಿಯಲ್ಲಿದ್ದು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ಕೊಡುಗೆ ನೀಡಿದ್ದಾರೆ.
 
ಇನ್ನು, ನಟ ಬಾಲಕೃಷ್ಣ ಕೂಡಾ ಎರಡೂ ರಾಜ್ಯಗಳಿಗೆ ತಲಾ 50 ಲಕ್ಷ ರೂ. ನೀಡಿದ್ದಾರೆ. ಇವರಲ್ಲದೆ ನಟ ನಿತಿನ್ ಎರಡೂ ರಾಜ್ಯಗಳಿಗೆ 10 ಲಕ್ಷ ರೂ.ಗಳ ಕೊಡುಗೆ ನೀಡಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರಗಳಿಗೆ ನೆರವಾಗಲು ಸೆಲೆಬ್ರಿಟಿಗಳು ಮುಂದೆ ಬರುತ್ತಿರುವುದು ಶ್ಲಾಘನೀಯ.
ಇದರಲ್ಲಿ ಇನ್ನಷ್ಟು ಓದಿ :