Widgets Magazine

ನಕಲಿ ಸೋಷಿಯಲ್ ಮೀಡಿಯಾ ಖಾತೆದಾರರಿಗೆ ಬೆಂಡೆತ್ತಿದ ‘ತಲಾ’ ಅಜಿತ್ ಕುಮಾರ್

ಚೆನ್ನೈ| Krishnaveni K| Last Modified ಭಾನುವಾರ, 8 ಮಾರ್ಚ್ 2020 (09:41 IST)
ಚೆನ್ನೈ: ತಮ್ಮ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದವರ ವಿರುದ್ಧ ‘ತಲಾ’ ಅಜಿತ್ ಕುಮಾರ್ ಕಾನೂನು ಕ್ರಮ ಕೈಗೊಂಡಿದ್ದಾರೆ.

 
ಅಜಿತ್ ಇದುವರೆಗೆ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿಲ್ಲ. ಹಾಗೂ ಯಾವುದೇ ಅಭಿಮಾನಿ ಪೇಜ್ ಗಳನ್ನೂ ಅವರು ಬೆಂಬಲಿಸುವುದಿಲ್ಲ. ಆದರೆ ನಕಲಿ ಖಾತೆದಾರರೊಬ್ಬರು ಅಜಿತ್ ಹೆಸರು ಹೇಳಿಕೊಂಡು ಟ್ವಿಟರ್ ಖಾತೆ ತೆರೆದಿದ್ದರು.
 
ಇದರ ಬಗ್ಗೆ ತಮ್ಮ ಲೀಗಲ್ ಟೀಂ ಮೂಲಕ ನೋಟಿಸ್ ನೀಡಿರುವ ಅಜಿತ್ ಇಂತಹ ಸುಳ್ಳು ಖಾತೆ ತೆರೆದವರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :