ಬೆಂಗಳೂರು: ನಟಿ ತಾರಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾಗ ಮಳೆಯಿಂದಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.ನಾವು ನೋಡಿದಲ್ಲೆಲ್ಲಾ ನೀರು, ದೇವರೇ ನಮ್ಮನ್ನು ಕಾಪಾಡಿ ವಾಪಸ್ ಬೆಂಗಳೂರಿಗೆ ಕರೆ ತಂದ ಎಂದು ತಾರಾ ಹೇಳಿಕೊಂಡಿದ್ದಾರೆ.‘ಕಾರು ನಿಯಂತ್ರಣ ತಪ್ಪಿ ನೀರಿನಲ್ಲಿ ತೇಲಾಡುತ್ತಿತ್ತು. ನಿಮಿಷ ನಿಮಿಷಕ್ಕೂ ನೀರಿನ ಸೆಳೆತ ಜಾಸ್ತಿಯಾಗುತ್ತಿತ್ತು. ನಮ್ಮ ಕಾರಿನ ಚಾಲಕ ಹೇಗೋ ಸುತ್ತಿ ಬಳಸಿ ನಮ್ಮನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದ. ಪುಣ್ಯಕ್ಕೆ ಅದು ಬೆಂಗಳೂರು ಹೈವೇ ಆಗಿತ್ತು. ಅಂತೂ ದೇವರ ದಯೆಯಿಂದ