ಈ ವರ್ಷ ಏಪ್ರಿಲ್ನಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲೆ ವಿಶೇಷ ಸಂಚಲನ ಮೂಡಿಸಿದ ತಿಥಿ ಚಿತ್ರ ಕಲಾವಿದರು ಅಭಿನಯಿಸಿರುವ ಮತ್ತೊಂದು ಚಿತ್ರ ಈ ವಾರ ನಿಮ್ಮ ಮುಂದೆ ಬರಲಿದೆ. ಜೀವಿತಾ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶಿವ ಎಸ್.ಬಿ. ನಿರ್ಮಿಸಿರುವ ತರ್ಲೆ ವಿಲೇಜ್ ಕಾಮಿಡಿ ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರಕ್ಕೆ ಸಿದ್ದೇಗೌಡ ಕಥೆ, ರಾಮು ನರಹಳ್ಳಿ ಛಾಯಾಗ್ರಹಣ, ವೀರಸಮರ್ಥ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ ಪ್ರಕಾಶ್, ಚಿಕ್ಕಪಾಳ್ಯ ಕಲೆಯಿದೆ.