ತೆಲುಗು ಬಿಗ್ ಬಾಸ್ ದೀಪಾವಳಿ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ಈ ನಟ

ಹೈದರಾಬಾದ್| pavithra| Last Modified ಶನಿವಾರ, 14 ನವೆಂಬರ್ 2020 (10:00 IST)
ಹೈದರಾಬಾದ್ : ತೆಲುಗು ಬಿಗ್ ಬಾಸ್ ಗೆ ರೇಟಿಂಗ್ ಅಷ್ಟಾಗಿ ಇರದ  ಕಾರಣ ಸಮಂತಾ ನಂತರ ಇದೀಗ ದೀಪಾವಳಿಯ ವಿಶೇಷ ಸಂಚಿಕೆಗೆ ಮತ್ತೊಬ್ಬ ನಟನಿಂದ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಈ ಹಿಂದೆ ದಸರಾ ವೇಳೆ ವಿಶೇಷ ಸಂಚಿಕೆಯಾಗಿ ನಟಿ ಸಮಂತಾ  ಅಕ್ಕಿನೇನಿ ಅವರಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಅತಿ ಹೆಚ್ಚು ಟಿಆರ್ ಪಿ ಸಿಕ್ಕಿತ್ತು. ಇದೀಗ ಮತ್ತೆ ದೀಪಾವಳಿ ವಿಶೇಷ ಸಂಚಿಕೆಗೆ ನಟ ಅವರಿಂದ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಈ ವಾರಾಂತ್ಯದ ಸಂಚಿಕೆಯಲ್ಲಿ ನಾಗಚೈತನ್ಯ ಅವರನ್ನು ಅತಿಥಿಯಾಗಿ ಕರೆತರಲಾಗುತ್ತಿದೆ. ಹಾಗೇ ಶನಿವಾರ  ಮತ್ತು ಭಾನುವಾರ ಇಬ್ಬರು ಅತಿಥಿಗಳನ್ನು ಕರೆತರುವ ಸಾಧ್ಯತೆ ಇದ್ದು, ಒಬ್ಬರು ನಟ ನಾಗಚೈತ್ನನ್ಯ ಹಾಗೂ ಇನ್ನೊಬ್ಬ ವ್ಯಕ್ತಿ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ ನಾಗಚೈತನ್ಯ ಅವರ ಅಭಿಮಾನಿಗಳ ಜೊತೆಗೆ ಪ್ರೇಕ್ಷರನ್ನು ಮೆಚ್ಚಿಸಲು ಬಿಗ್ ಬಾಸ್ ತಂಡ ಯೋಚಿಸಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :