ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆಯಂತೆ ರಾಧೆಶ್ಯಾಮ್’ ಚಿತ್ರದ ಕ್ಲೈಮಾಕ್ಸ್ ದೃಶ್ಯದ ಸೆಟ್

ಹೈದರಾಬಾದ್| pavithra| Last Modified ಶುಕ್ರವಾರ, 13 ನವೆಂಬರ್ 2020 (13:50 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿರುವ ಬಹುನಿರೀಕ್ಷೆಯ ಚಿತ್ರ ‘ರಾಧೆಶ್ಯಾಮ್’ ಚಿತ್ರದ ಕ್ಲೈಮಾಕ್ಸ್ ದೃಶ್ಯದ ಸೆಟ್ ನ್ನು ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

‘ರಾಧೆಶ್ಯಾಮ್’ ಚಿತ್ರ 250 ಕೋಟಿ ರೂ. ಬಜೆಟ್ ನಲ್ಲಿ ಮೂಡಿಬರುತ್ತಿದೆ. ಇದು ಒಂದು ಪ್ರೇಮಕಥೆಯಾಗಿದ್ದು, ಚಿತ್ರದ ಶೂಟಿಂಗ್ ಇಟಲಿಯಲ್ಲಿ ನಡೆಯುತ್ತಿತ್ತು, ಇದೀಗ ಭಾರತಕ್ಕೆ ಮರಳಿದ ಚಿತ್ರತಂಡ ಚಿತ್ರದ ಕ್ಲೈಮಾಕ್ಸ್ ದೃಶ್ಯ ಹೈದರಾಬಾದ್ ನಲ್ಲಿ ಶೂಟ್ ಮಾಡಲಿದ್ದು. ಅದಕ್ಕಾಗಿ ವಿಶೇಷ ಸೆಟ್ ನ್ನು ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆಯಂತೆ. ಇದಕ್ಕಾಗಿ 30ಕೋಟಿ ರೂ. ಖರ್ಚು ಮಾಡಲಾಗುತ್ತಿದೆಯಂತೆ.

‘ರಾಧೆಶ್ಯಾಮ್’ ಚಿತ್ರ ಪ್ರಭಾಸ್ ಅವರ 20ನೇ ಚಿತ್ರವಾಗಿದ್ದು, ಇದು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ನಿರ್ಮಿಸಲಾಗಿದ್ದು, ಮುಂದಿನ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :