ಡೆಡ್ಲಿ ಕೊರೊನಾ ವೈರಸ್ ಕೇಸ್ ಗಳು ಹೆಚ್ಚಾಗುತ್ತಿರುವಂತೆ ಜನತೆಯಲ್ಲಿ ಆತಂಕವೂ ಹೆಚ್ಚಾಗತೊಡಗಿದೆ. ಈ ನಡುವೆ ಚಿತ್ರನಟ ರವಿ ಶಂಕರ್ ಅವರು ಟ್ವಿಟ್ ಮಾಡಿದ್ದಾರೆ. ನನ್ನ ಮನೆಯ ಎದುರಿನ ಮನೆಗೆ ಕೊರೊನಾ ವಕ್ಕರಿಸಿದೆ ಎಂದು ಹೇಳಿದ್ದು, ಮಕ್ಕಳಿರುವ ನನ್ನ ಮನೆಯನ್ನು ದೇವರೇ ಕಾಪಾಡಬೇಕು.ಕ್ವಾರಂಟೈನ್ ಮಾಡಿದ್ದು 14 ದಿನ ಮನೆಯ ಬಾಗಿಲು ತೆರೆಯುವಂತಿಲ್ಲ. ಈ ಬಗ್ಗೆ ವಿಚಾರಿಸಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.