ಇಂದಿನಿಂದ ಚಿತ್ರಮಂದಿರಗಳು ಓಪನ್: ಮರು ರಿಲೀಸ್ ಆಗುತ್ತಿರುವ ಸಿನಿಮಾಗಳು

ಬೆಂಗಳೂರು| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (11:19 IST)
ಬೆಂಗಳೂರು: ಮತ್ತೆ ಗಾಂಧಿನಗರ ಕಳೆಗಟ್ಟಲಿದೆ. ಇಂದಿನಿಂದ ಚಿತ್ರರಂಗ ತೆರೆಯಲಿದ್ದು, ಸಿನಿಮಾ ಚಟುವಟಿಕೆಗಳು ಮತ್ತೆ ಆರಂಭವಾಗಲಿದೆ.
 

ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಓಪನ್ ಆಗುತ್ತಿದ್ದರೂ ಕೆಲವು ಷರತ್ತುಗಳು ಅನ್ವಯವಾಗಲಿದೆ. ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಒಂದು ಶೋಗೆ ವೀಕ್ಷಿಸಲು ಅವಕಾಶ ಸಿಗಲಿದ್ದು, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಲಿದೆ.
 
ಇನ್ನು, ಚಿತ್ರಮಂದಿರ ತೆರೆಯುತ್ತಿದ್ದಂತೇ ಲಾಕ್ ಡೌನ್ ಗೂ ಮೊದಲು ತೆರೆ ಕಂಡಿದ್ದ ಹಲವು ಸಿನಿಮಾಗಳು ರಿ ರಿಲೀಸ್ ಗೆ ಸಿದ್ಧವಾಗಿದೆ. ಚಿರು ಸರ್ಜಾ ಅಭಿನಯದ ಶಿವಾರ್ಜುನ, ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’, ‘ಕಾಣದಂತೆ ಮಾಯವಾದನು’, ಪುನೀತ್ ರಾಜಕುಮಾರ್ ನಿರ್ಮಾಣದ ‘ಮಾಯಾಬಜಾರ್ 2016’, ಮುಂತಾದ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಈಗ ಹಳೆಯ ಸಿನಿಮಾಗಳೇ ಮರು ರಿಲೀಸ್ ಆಗುತ್ತಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಬಹುದು.
ಇದರಲ್ಲಿ ಇನ್ನಷ್ಟು ಓದಿ :