ಪ್ರೇಕ್ಷಕರ ಸ್ವಾಗತಕ್ಕೆ ರೆಡಿ ಆಯ್ತು ಚಿತ್ರಮಂದಿರ

ಬೆಂಗಳೂರು| Krishnaveni K| Last Modified ಬುಧವಾರ, 21 ಜುಲೈ 2021 (12:52 IST)
ಬೆಂಗಳೂರು: ರಾಜ್ಯ ಸರ್ಕಾರ  ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯದ ಹೆಚ್ಚಿನ ಥಿಯೇಟರ್ ಗಳು ಸ್ವಚ್ಛತಾ ಕಾರ್ಯ ಮುಗಿಸಿ ಪ್ರೇಕ್ಷಕರ ಸ್ವಾಗತಕ್ಕೆ ಸಿದ್ಧವಾಗಿದೆ.

 
ಸದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನೂ ಯಾವುದೇ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಹಾಗಿದ್ದರೂ ಚಿತ್ರಮಂದಿರಗಳು ರಾಜ್ಯ ಸರ್ಕಾರದ ಆದೇಶದ ಬೆನ್ನಲ್ಲೇ ತಮ್ಮ ಕರ್ತವ್ಯ ಆರಂಭಿಸಿದೆ.
 
ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ಹೊಸ ಸಿನಿಮಾಗಳ ರಿಲೀಸ್ ದಿನಾಂಕಗಳು ಪ್ರಕಟಣೆಯಾಗಬಹುದು. ಆದರೆ ಅಲ್ಲಿಯವರೆಗೆ ಕೆಲವು ಸಿನಿಮಾಗಳು ರಿ ರಿಲೀಸ್ ಆಗುವ ಸಾಧ‍್ಯತೆಯಿದೆ. ಆದರೆ ಕೊರೋನಾ ಭಯ ಬಿಟ್ಟು ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಬೇಕಷ್ಟೇ.
ಇದರಲ್ಲಿ ಇನ್ನಷ್ಟು ಓದಿ :